ಪತ್ರಿಕಾ ಪ್ರಕಟಣೆ- 13.08.2019

ಪತ್ರಿಕಾ ಪ್ರಕಟಣೆ

01. ದಿನಾಂಕ: 13.08.2019 ರಂದು ರಾಮನಗರ ಪುರ ಠಾಣಾ ವ್ಯಾಪ್ತಿಯ ಟಿಪ್ಪುನಗರ ಬಕ್ಷಿಕೆರೆ ಮದ್ಯ ಅಕ್ರಮವಾಗಿ ಗಾಂಜಾ ಪ್ಯಾಕೆಟ್‍ಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಪ್ರಯತ್ತಿಸುತ್ತಿದ್ದÀ್ದ ವ್ಯಕ್ತಿಯ ಮೇಲೆ ಡಿ.ವೈ.ಎಸ್.ಪಿ ರಾಮನಗರ ಉಪ-ವಿಭಾಗ, ರಾಮನಗರ ಪುರ ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಒಟ್ಟು 800 ಗ್ರಾಂ ಗಾಂಜಾ ಪ್ಯಾಕೆಟ್‍ಗಳನ್ನು ಅಮನತ್ತು ಪಡಿಸಿ ಆರೋಪಿ ದಿನೇಶ್ ಬಿನ್ ಶ್ರೀನಿವಾಸ್ ನನ್ನು ವಶಕ್ಕೆ ಪಡೆದು ರಾಮನಗರ ಪುರ ಠಾಣೆ ಮೊ.ಸಂ 64/2019 ಕಲಂ 20(ಬಿ) ಎನ್.ಡಿ.ಪಿ.ಎಸ್ ಆಕ್ಟ್ ರೀತಿಯ ಪ್ರಕರಣ ದಾಖಲಿಸಿರುತ್ತದೆ.

02. ದಿನಾಂಕ 13-08-2019 ರಂದು ಕುದೂರು ಪೊಲೀಸ್ ಠಾಣೆ ಸರಹದ್ದು, ಮಾಗಡಿ ತಾ. ತಿಪ್ಪಸಂದ್ರ ಹೋಬಳಿ, ತಾಳೆಕೆರೆ ಹ್ಯಾಂಡ್ ಪೊಸ್ಟ್ ಬಳಿ ಹೆಚ್‍ಸಿ-268 ನಾರಾಯಣಮೂರ್ತಿ ಮತ್ತು ಹೆಚ್ ಜಿ-418 ಸೋಮಶೇಖರ್ ರವರುಗಳು ವಾಹನಗಳನ್ನು ತಪಾಷಣೆ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಕೆಎ-41-ಎ-5869 ಮತ್ತು ಕೆಎ-41-ಎ-9779 ಲಾರಿಗಳನ್ನು ವಶಕ್ಕೆ ಪಡೆದು ವರದಿ ನೀಡಿ ಕುದೂರು ಪೊಲೀಸ್ ಠಾಣಾ ಮೊನಂ. 206/2019 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

03. ದಿನಾಂಕ 13-08-2019 ರಂದು ರಾತ್ರಿ ಕುದೂರು ಪೊಲೀಸ್ ಠಾಣಾ ಸರಹದ್ದು, ಸೋಲೂರು ಹೋಬಳಿ, ಶ್ರೀನಿವಾಸನಗರದ ಎಸ್.ಎಲ್.ಎನ್ ಪ್ರಾವಿಷನ್ ಸ್ಟೋರ್ ಬಳಿ ಅಕ್ರಮವಾಗಿ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪಿ ನರಸಿಂಹಯ್ಯ ಬಿನ್ ಗಂಗಯ್ಯ, 50 ವರ್ಷ, ಗೊರೂರು, ಇವರನ್ನು ವಶಕ್ಕೆ ಪಡೆದು 6 ಒರಿÀಜಿನಲ್ ಚಾಯ್ಸ್‍ನ ಖಾಲಿ ಪೌಚ್ ಗಳನ್ನು ಅಮಾನತ್ತುಪಡಿಸಿ ಕುದೂರು ಪೊಲೀಸ್ ಠಾಣೆ ಮೊ.ನಂ. 208/2019 ಕಲಂ 15(ಎ), 32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.

04. ದಿನಾಂಕ:13.08.2019ರಂದು ಮಾಗಡಿ ಠಾಣಾ ವ್ಯಾಪ್ತಿಯ ಸುಬ್ಬಯ್ಯ ಲೇ ಔಟ್ ಬಳಿ ಬಳಿ ಅಕ್ರಮವಾಗಿ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪಿ ಯಲ್ಲಯ್ಯ @ ಸನ್ನು ಇವರನ್ನು ವಶಕ್ಕೆ ಪಡೆದು ಮದ್ಯದ ಪೌಚ್ ಗಳನ್ನು ಅಮಾನತ್ತುಪಡಿಸಿ ಮಾಗಡಿ ಪೊಲೀಸ್ ಠಾಣೆ ಮೊ.ನಂ. 156/2019 ಕಲಂ 15(ಎ), 32(3) ಕೆಇ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿರುತ್ತೆ.