ಕಗ್ಗಲೀಪುರ ಪೊಲೀಸ್ ಠಾಣೆ ಮೊ.ಸಂ. 482/17 ಕಲಂ 302, 201 ಐಪಿಸಿ ರೀತಿ ಪ್ರಕರಣದ ಕೊಲೆ ಆರೋಪಿ ಬಂಧನ.

– :   ಪತ್ರಿಕಾ ಪ್ರಕಟಣೆ    :  –

ಕೊಲೆ ಆರೋಪಿ ಬಂಧನ

     ದಿನಾಂಕ 04/12/17 ರಂದು ಮಧ್ಯಾಹ್ನನ ವೇಳೆಯಲ್ಲಿ ಕಗ್ಗಲೀಪುರ ಪೊಲಿಸ್ ಠಾಣಾ ಸರಹದ್ದು, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಉತ್ತರಿ ಗ್ರಾಮದ ಸ್ಮಾಶಾನದ ಬಳಿ ಇರುವ ನಿರ್ಜನ ಪ್ರದೇಶದಲ್ಲಿ ಸುಮಾರು 30-35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಕೊಲೆಯಾಗಿ ಮೃತಪಟ್ಟಿರುವ ಬಗ್ಗೆ ಮೃತದೇಹವು ದೊರೆತಿದ್ದು, ಈ ಬಗ್ಗೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 482/17 ಕಲಂ 302, 201 ಐಪಿಸಿ ರೀತಿ ಪ್ರಕರಣ ದಾಖಲಾಗಿತ್ತು.

      ಪ್ರಕರಣದಲ್ಲಿ ಕೊಲೆಯಾಗಿ ಮೃತಪಟ್ಟಿರುವ ವ್ಯಕ್ತಿ ಮತ್ತು ಈ  ಕೊಲೆ ಮಾಡಿರುವ ಆರೋಪಿಯು ಯಾರೆಂದು ತಿಳಿಯದಂತಹ ಕಗ್ಗಂಟಾಗಿ ಅಭೇದ್ಯವಾದ ಪ್ರಕರಣವನ್ನು ರಾಮನಗರ ಜಿಲ್ಲೆಯ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ. ರಮೇಶ್ ಬಿ. ಐ.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ರಾಮನಗರ ಉಪವಿಭಾಗದ ಮಾನ್ಯ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ.ಎಂ.ಕೆ. ತಮ್ಮಯ್ಯ ರವರ ನೇತೃತ್ವದಲ್ಲಿ ಹಾರೋಹಳ್ಳಿ ವೃತ್ತ ನಿರೀಕ್ಷಕರಾದ ಶ್ರೀ.ನಂದೀಶ ಹೆಚ್.ಎಲ್. ರವರು ತನಿಖೆ ಕೈಗೊಂಡು ರಾಮನಗರ ಜಿಲ್ಲಾ ನಿಸ್ತಂತು ವಿಭಾಗದ ಪೊಲೀಸ್ ನಿರೀಕ್ಷಕರಾದ ಶ್ರೀ ಶಿವಶಂಕರ್ ಜಿ. ಎಂ. ರವರ ಸಹಕಾರದಿಂದ ಕಗ್ಗಲೀಪುರ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀ ಹೆಚ್.ಬಿ. ಸುನಿಲ್, ಹಾರೋಹಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀ ಕೃಷ್ಣಕುಮಾರ್ ಕೆ. ಹಾಗೂ ಮತ್ತು ಸಿಬ್ಬಂದಿಯವರಾದ ಹೆಚ್.ಸಿ. 30 ದುರ್ಗೇಗೌಡ, ಹೆಚ್.ಸಿ. 187 ಮಂಜುನಾಥ್, ಹೆಚ್.ಸಿ. 370 ನರಸಿಂಹಮೂರ್ತಿ, ಹೆಚ್.ಸಿ. 283 ಅನಂತ್ ಕುಮಾರ್ ಎಲ್., ಹೆಚ್.ಸಿ. 343 ಮಡೆಪ್ಪ, ಪಿ.ಸಿ. 295  ನಾಗರಾಜು, ಪಿ.ಸಿ. 261 ಫೈರೋಜ್, ಎ.ಹೆಚ್.ಸಿ. 79 ಫೈರೋಜ್ ಪಾಷಾ, ಎ.ಪಿ.ಸಿ. 111  ಅಶ್ವಥ್ ರವರುಗಳ ತಂಡ ರಚನೆ ಮಾಡಿ ಭೇಧಿಸಿ ಮೃತಪಟ್ಟಿರುವ ವ್ಯಕ್ತಿಯು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಕೊಟ್ಯಾಕ್ ಮಹಿಂದ್ರಾ ಬ್ಯಾಂಕಿನಲ್ಲಿ ಡೆಪ್ಯೂಟಿ ಮೇನೇಜರ್ ಆಗಿ ಕೆಲಸ ಮಾಡುತ್ತಿರುವ ಅನಿಲ್ ಎಂದು ಪತ್ತೆ ಮಾಡಲಾಗಿರುತ್ತದೆ. ಅಲ್ಲದೇ ಈ ಕೊಲೆ ಮಾಡಿರುವ ಆರೋಪಿ ಬೆಂಗಳೂರಿನ ಗಣಪತಿಪುರದಲ್ಲಿ ವಾಸವಾಗಿದ್ದು, ಸ್ಯಾನ್ ಸಿಟಿ ಡೆವಲಪರ್ಸ್ ಕಂಪನಿಯಲ್ಲಿ ಫೀಲ್ಡ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಶಿವಬಸವೇಗೌಡ ಎಂದು ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

      ಆರೋಪಿಯು ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಪ್ರೀತಿಸುತ್ತಿದ್ದು, ಆಕೆ ಈತನ ಪ್ರೀತಿಯನ್ನು ನಿರಾಕರಿಸಿ ತನ್ನ ಮನೆಯವರ ಒಪ್ಪಿಗೆಯಂತೆ ಕಳೆದ 3 ತಿಂಗಳ ಹಿಂದೆ ಈ ಪ್ರಕರಣದಲ್ಲಿ ಮೃತಪಟ್ಟಿರುವ ಅನಿಲ್ ರವರನ್ನು ಮದುವೆಯಾಗಲು ನಿಶ್ಚಯಿಸಿ ನಿಶ್ಚಿತಾರ್ಥವಾಗಿರುತ್ತದೆ. ಆಕೆಯು ತನ್ನ ನಿಶ್ಚಿತಾರ್ಥತ ಫೋಟೋಗಳನ್ನು ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸ್ನೇಹಿತೆಯರಿಗೆ ತೊರಿಸಿ ಸಂತೋಷದಿಂದ ಇದ್ದದ್ದನ್ನು ಕಂಡ ಶಿವಬಸವೇಗೌಡ ಸಹಿಸಿಕೊಳ್ಳಲಿಲ್ಲ. ಅಲ್ಲದೇ ಅನಿಲ್ ಬ್ಯಾಂಕಿನಲ್ಲಿ ಡೆಪ್ಯೂಟಿ ಮೇಜೇನರ್ ಆಗಿದ್ದು, ತನಗಿಂತಲೂ ಮೇಲ್ದರ್ಜೆಯ ನೌಕರಿಯಲ್ಲಿರುವುದನ್ನು ಮತ್ತು ತಾನು ಪ್ರೀತಿಸಿದ ಹುಡುಗಿ ತನ್ನ ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ದ್ವೇಷದ ಮನೋಭಾವವನ್ನು ಇಟ್ಟುಕೊಂಡು ಅನಿಲ್ ನನ್ನು ಕೊಲೆ ಮಾಡಲು ನಿರ್ಧರಿಸಿ ಯಾರಿಗೂ ತಿಳಿಸದೇ ಅನಿಲ್ ನ ಪರಿಚಯ ಮಾಡಿಕೊಂಡು ಅವನ ಸ್ನೇಹ ಬೆಳೆಸಿ ದಿನಾಂಕ 04/12/17 ರಂದು ಮಧ್ಯಾಹ್ನದ ವೇಳೆ ಅನಿಲ್ ನನ್ನು ತನ್ನ ಬೈಕಿನಲ್ಲಿ ಉತ್ತರಿ ಗ್ರಾಮಕ್ಕೆ ರೆಸಾರ್ಟ್ ಗೆ ಹೋಗಿ ಬರೋಣ ಎಂದು ಸುಳ್ಳು ಹೇಳಿ ಬೈಕಿನಲ್ಲಿ ಕರೆದುಕೊಂಡು ಬಂದು ತಾನು ಮಾಡಿಕೊಂಡಿದ್ದ ಪ್ಲಾನಿನಂತೆ ಎಲೆಕ್ಟ್ರಿಕ್ ವೈರ್ ಗಳನ್ನು ಬಳಸಿ ವಿದ್ಯುತ್ ಶಾಕ್ ಹೊಡೆಸಿ ಕೊಲೆ ಮಾಡಿ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಕೃತ್ಯ ಮರೆಮಾಚಲು ನಾಶಪಡಿಸಿರುವುದಾಗಿ ಪತ್ತೆ ಮಾಡಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರ್ಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿರುತ್ತಾರೆ.