ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಪ್ರಕರಣ ಪತ್ತೆ ಮಾಡಿ 4 ಜನ ಆರೋಪಿಗಳು ಹಾಗು 44 ಕೆ.ಜಿ ಗಾಂಜಾ ವಶಕ್ಕೆ.

ಪತ್ರಿಕಾ ಪ್ರಕಟಣೆ

ದಿ: 01-09-2019 ರಂದು ರಾಮನಗರ ಟೌನ್ ಹನುಮಂತನಗರ ರಾಯರಬೀದಿಯಲ್ಲಿ ವಾಸವಿರುವ ಬೈರೇಗೌಡ@ ಬೈರ, ಬಿನ್ ನಿಂಗಪ್ಪ, ರವರ ಮನೆಯಲ್ಲಿ ಗಾಂಜಾವನ್ನ್ಪು ಇಟ್ಟಿರುವ ಬಗ್ಗೆ ಮಾಹಿತಿ ಮೇರೆಗೆ ಮಾನ್ಯ ರಾಮನಗರ ಜಿಲ್ಲಾ ಎಸ್ಪಿ ಸಾಹೇಬರಾದ ಶ್ರೀ ಡಾ.ಅನೂಪ್ಶೆಟ್ಟಿಯವರ ಮಾರ್ಗದರ್ಶನದಲ್ಲಿ ರಾಮನಗರ ಉಪವಿಭಾಗದ ಡಿವೈಎಸ್ಪಿಯವರಾದ ಶ್ರೀ ಪುರುಷೋತ್ತಮ್ರವರ ನೇತೃತ್ವದಲ್ಲಿ ರಾಮನಗರದ ಪುರ ವೃತ್ತ ನೀರೀಕ್ಷಕರಾದ ಶ್ರೀ ನರಸಿಂಹಮೂರ್ತಿ, ಐಜೂರು ಪೊಲೀಸ್ ಠಾಣೆಯ ಪಿಎಸ್ ರವರಾದ ಶ್ರೀಮತಿ ಶುಭಾಂಬಿಕ ಆರ್ ರವರು ಹಾಗೂ ಸಿಬ್ಬಂದಿಗಳು ಮೇಲ್ಕಂಡ ಸ್ಥಳದಲ್ಲಿ ದಾಳಿ ಮಾಡಿ ಆರೋಪಿಗಳಾದ 1).ಸಿದ್ದಿಕ್ @ ಸಾದಿಕ್ ಪಾಷಾ ಬಿನ್ ಲೇ ಸೈಯದ್ ಮುಜೀಬ್, 30 ವರ್ಷ, ಮುಸ್ಲೀಂ, ಪೈಂಟ್ ಕೆಲಸ, ಮಲ್ಲೇಶ್ವರ ಬಡಾವಣೆ. ಐಜೂರು ಗುಡ್ಡೆ. ರಾಮನಗರ ಟೌನ್, 2).ಬೈರೇಗೌಡ @ಬೈರ ಬಿನ್ ನಿಂಗಪ್ಪ. 31 ವರ್ಷ, ಕಾರ್ ಪೆಂಟರ್. ಹೊನ್ನಮ್ಮ ಛತ್ರದ ಮುಂಬಾಗ, ರಾಯರ ಬೀದಿ, ಹನುಮಂತನಗರ, ರಾಮನಗರ ಟೌನ್, 3).ಮಹಮ್ಮದ್ ಅಲಿ ಬಿನ್ ಅಬ್ಬು, 49 ವರ್ಷ, ಮುಸ್ಲಿಂ ಜನಾಂಗ, ಕಲ್ಲುಬಾಳೆ, ವಿರಾಜಪೇಟೆ ತಾಲೂಕು ಕೊಡಗುಜಿಲ್ಲೆ. 4).ಮಹಮ್ಮದ್ ಇಸ್ಮಾಯಿಲ್ ಬಿನ್ ಸೈಯದ್ ಸಾಬುಲಾಲ್,40 ವರ್ಷ,ಮುಸ್ಲಿಂ ಜನಾಂಗ,ಕಲ್ಕುಣಿ ಗ್ರಾಮ,ಮಳವಳ್ಳಿ ತಾಲೂಕು ಮಂಡ್ಯ ಜಿಲ್ಲೆ ಇವರುಗಳಿಂದ ಸುಮಾರು 44 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಐಜೂರು ಪೊಲೀಸ್ ಠಾಣೆಯಲ್ಲಿ ಮೊ ಸಂ 44/2019 ಕಲಂ 21(ಸಿ) ಎನ್ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತೆ. ಸದರಿ ದಾಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿರುತ್ತಾರೆ.

ದಿನಾಂಕ:02-01-2019